ಹಿಂಬಾಲಿಸಿ

ಶುಕ್ರವಾರ, ಏಪ್ರಿಲ್ 11, 2014

ಸು(ರ)ಶಿಕ್ಷಿತ

ಸು(ರ)ಶಿಕ್ಷಿತ
ಸು(ರ)ಶಿಕ್ಷಿತ
ಬೀದಿ ಬೆಕ್ಕಿನ
ಮೇಲಿರಿಸಿದ ನಿಗದ
ಒಂದಂಶ ಮನೆ ಬೆಕ್ಕಿನ
ಮೇಲಿರೆ ಹಾಲು ಸುರಕ್ಷಿತ.
.............................
ಊರ ಜನರ ಅಳೆವ
ಮೊದಲು, ತನ್ನಾಳವ
ತಾನರಿಯೆ ನೀ ಸುಶಿಕ್ಷಿತ.

- ಸಂತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

ಭಾನುವಾರ, ಮಾರ್ಚ್ 30, 2014


ಬೇವು-ಬೆಲ್ಲ
ಬೇವು-ಬೆಲ್ಲ
ಯುಗಾದಿ ಹಬ್ಬದ
ಹಾರೈಕೆಯ ಸಿಹಿಯಲಿ
ಬಾಳಲಿ ಕಹಿಯು
ಕರಗುವುದೆಂದು ಕೊಂಡಿದ್ದೆ.
ಹಾಗಾಗಲಿಲ್ಲ,
ಹಾರೈಕೆಯ ಬೆಲ್ಲವನು
ಎಚ್ಚರಿಕೆಯ ಬೇವಿನಲಿ
ಸುತ್ತಿ ಕೊಟ್ಟಿದ್ದರು ಹಿತೈಷಿಗಳು
ಸಿಹಿರೋಗ ಬಾರದಿರಲೆಂದು.

- ಸಂತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

ಶನಿವಾರ, ಮಾರ್ಚ್ 22, 2014

ಗಾಳಿಪಟ

ಗಾಳಿಪಟ
********
ಬಾಲ್ಯದ ನೆನಪುಗಳು
ಹಾರಿ ಬಿಟ್ಟ ಗಾಳಿಪಟದಂತೆ,
ದೂರದಿ ಅಂದವ
ಸವಿಯಬೇಕು ವಿನಃ,
ಮತ್ತೆ ಮುಟ್ಟಲಾಗದು.

-ಸಂತೋಷ ನಾಯಕ್. ಎಸ್ 

ಶನಿವಾರ, ಮಾರ್ಚ್ 15, 2014

ಹೊತ್ತಿಲ್ಲ

ಹೊತ್ತಿಲ್ಲ
*******
ಕವಿಯಾಗಲು
`ಹೊತ್ತಿಲ್ಲ' ಎನ್ನುತ್ತಿದ್ದವರ
ತಲೆ ಖಾಲಿಯಾಗಿತ್ತು!

-ಸಂತೋಷ ನಾಯಕ್. ಎಸ್ 

ಗುರುವಾರ, ಮಾರ್ಚ್ 13, 2014

ಸವೆತ

ಸವೆತ
*******
ಬಾಳ ಪಯಣದಲಿ
'ಸವೆತ'ವೂ, ಕವಿತೆಯ
ವಿಷಯವಾಗುವುದು
ಎನ್ನುವಷ್ಟರಲಿ,
ಕೊನೆಯ ಸಾಲು
ವಿರಾಮ ಇಟ್ಟಿತ್ತು.

-ಸಂತೋಷ ನಾಯಕ್. ಎಸ್‌ ಸವೆತ

ಸೋಮವಾರ, ಮಾರ್ಚ್ 10, 2014

ಚಿಂತೆ

ಚಿಂತೆ
*****
ಚಿಂತೆಯಿಂದ
ಚಿತೆಯಾದರೂ
ಅದರಲ್ಲೊಂದು
ನಶೆ ಇಹುದು,
ದೇಹಕ್ಕೆ ಹಾನಿಯಾದರೂ
ಮನಕೆ ಮದನೀಡುವ
ಮದ್ಯದಂತೆ!

-ಸಂತೋಷ ನಾಯಕ್. ಎಸ್ 

ಬುಧವಾರ, ಜನವರಿ 15, 2014

ದಿಗ್ಭಂಧ

ದಿಗ್ಭಂಧ
ದಿಗ್ಭಂಧ
******
ಅಮವಾಸ್ಯೆ ರಾತ್ರಿಯ
ಕತ್ತಲ ಕಪ್ಪುಡುಗೆಯ
ಕಟ್ಟಳೆಯ ನಡುವೆಯೂ,
ಮಿನುಗು ತಾರೆಯ
ಚುಕ್ಕಿ ಇಟ್ಟು, ರಂಗಿಗಾಗಿ
ಹಾತೊರೆಯುತ್ತಿತ್ತು ಆಗಸ.

:ಸಂತೋಷ ನಾಯಕ್ ಎಸ್.