ಹಿಂಬಾಲಿಸಿ

ಭಾನುವಾರ, ಜನವರಿ 27, 2013

ರಾಜಕಾರಣಿ

ಆತನಿಗೆ ಹೊಸತು ರಾಜಕಾರಣ
ಆತ ಮಾಡುತ್ತಿಲ್ಲ ಕಾಲಹರಣ
ಆತನದ್ದೀಗ,
 ದಾಖಲೆಯ ನೂರನೆಯ ಹಗರಣ!!

-ಸಂತೋಷ ನಾಯಕ್. ಎಸ್ 

ಶನಿವಾರ, ಜನವರಿ 26, 2013ಮಿನಿ ಮಿನಿ ಮಿನುಗುವ 
ನಕ್ಷತ್ರವೇ ನೀನೆಷ್ಟು ಧನ್ಯ,
ದೂರದ ಆಗಸದಿ ಉರಿಯುವ ನಿನ್ನ 
ಜನ ಮೆಚ್ಚುವರು ಕೊಂಡಾಡುವರು.
ನಿನ್ನುರಿಯ ಎಳ್ಳಷ್ಟೂ ಉರಿಯಿಲ್ಲದ ನನ್ನ
ಕಾಡ್ಗಿಚ್ಚು ಎನ್ನುವರು.
ನನ್ನುರಿಯ ಉರಿಗೊಡದೆ ಎನಗೆ 
ನೀರತೊಯ್ಪರು, ಇವರು ಮನುಜರು!

ಎಲೆ ಮಾನವನೇ..
ನಾ ಸುಟ್ಟ ಕಾನನವು 
ಪುನರಪಿ ಚಿಗುರುವುದು.
ನೀ ನಡೆದ ಹಾದಿಯಲಿ ಗರಿಹುಲ್ಲು ಚಿಗುರದು.
ನೀನಾರಿಗಾದೆಯೋ ಎಲೆ ಮಾನವನೇ??

- ಸ೦ತೋಷ ನಾಯಕ್. ಎಸ್
(೨೦೦೩ ಡಿಸೆ೦ಬರ್ "ಉಡುಪಿ ನ್ಯೂಸ್" ಪತ್ರಿಕೆ ಯಲ್ಲಿ ಪ್ರಕಟಿತ ನನ್ನ ಚೊಚ್ಚಲ ಲೆಖನ)ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟಿತ... ವರುಣನ ಮುತ್ತಿಗೆ ನಾಚಿ 
ನೀರಾಗುವ ವಸುಂಧರೆ
ಹೊರುವಳು ಹಸಿರೆ೦ಬ ಬಸಿರು
ಹದೆವಳು ಫಲ ಪುಷ್ಪ
ಧಾನ್ಯಗಳಾದಿ ಮಕ್ಕಳ.

- ಸಂತೋಷ ನಾಯಕ್ .ಎಸ್
ಬುಧವಾರ, ಜನವರಿ 23, 2013

ಕೆಂಪು ಚೆಲುವೆ
*ಕೆಂಪು ಚೆಲುವೆ*

ಕಠಿಣ ಕಲ್ಲ ಬಂಡೆ ಮೇಲೆ 
ಬೆಳೆದ ಮುಳ್ಳ ಗಿಡದಿ,
ಅರಳಿ ನಿಂತ ಚೆಲುವ ಹೂವೆ;
ರವಿಯು ನಿನ್ನ ನೋಡುತಿರಲು
ನಾಚಿ ನಗುವ “ಕೆಂಪು ಚಲುವೆ”.

ಪುಷ್ಪಪಾತ್ರೆಯಿಂದ ಬಂದ ಮೊಗ್ಗೆ
ಬದುಕಿನೋಳೆಷ್ಟು ಆಯ್ಕೆ ನಿನಗೆ?
ಕದಲಿ ದಾರ ಬ೦ಧನದಿ ನಾರಿ ಮುಡಿಯ 
ಸೇರುವಾಯ್ಕೆ, ದ್ವಿಜರ ಮ೦ತ್ರ ಘೋಷದೊಳು 
ಹರಿಯ ಪಾದ ಸೇರುವಾಯ್ಕೆ, 
ಭ್ರಮರ ನಾದ ಲೀಲೆ ಕೇಳಿ ಸಂತಸದಿ ಬಾಳುವಾಯ್ಕೆ.

ಬದುಕ ಭ್ರಮಣೆಯಿಂದ ನಿನ್ನ 
ನೋಡಬಂದ ರಸಿಕನನ್ನು 
ಗಿಡದ ಮುಳ್ಳಿನಿಂದ ಚುಚ್ಚಿ,
ಎಸಲ ತುಟಿಯ ಒಳಗೆ ನಗುವೆ!!
ನೀನು ಮಹಾ “ಕೆಂಪು ಚಲುವೆ”!!

ಕಾಲ ಚಕ್ರ ಉರುಳುತಿರಲು 
ಎಸಳು ಎಸಳು ಉದುರುತಿರಲು,
ಸಮಯವಾಗ ಮೀರಿ ಇರಲು,
ಮುಳ್ಳ ನೋವ ತಿಂದ ರಸಿಕ 
ತನ್ನ ನೋವ ಗೀಚುತಿರಲು,
ನಿನ್ನ ಪರಿಗೆ ನೀ 
ನೊ೦ದರೆನು ಫಲ “ಕೆಂಪು ಚಲುವೆ”??

- ಸ೦ತೋಷ ನಾಯಕ್ ಎಸ್.

ಫೋಟೋ ಕೃಪೆ : ಶ್ರೀಪತಿ ಪಾಟ್ಕರ್