ಹಿಂಬಾಲಿಸಿ

ಶುಕ್ರವಾರ, ಏಪ್ರಿಲ್ 26, 2013

*ಕವಿ ಸಮಯ*************
ಮನದಿ ಮಿಂಚಿದ
ಕ್ಷಣದ ಮಿಲನಕೆ
ಭಾವಗರ್ಭದಿ
ಬೆಳೆದ ಭ್ರೂಣವು
ನವರಸಗಳ
ಶಬ್ದ ಪುಂಜದಿ
ಹೊರಬರುವ
ಮಧುರ ಕ್ಷಣ.   

- ಸಂತೋಷ ನಾಯಕ್. ಎಸ್

ಭಾನುವಾರ, ಏಪ್ರಿಲ್ 21, 2013

*ಕಣ್ಣ ನುಡಿ *
**********


ಬಲತ್ಕಾರದ
ನಗೆ ಸೂಸಿ
ಚಮತ್ಕಾರವೇಕೆ
ಗೆಳೆಯ?
ಚಲಿಪ ತುಟಿಗಳು
ನಿನ್ನ೦ಕೆಯಲಿಹುವು  
ಆದರೆ,
ನುಡಿವ ಕಣ್ಗಳು
ಹುಸಿಯಲಾರವು.

- ಸಂತೋಷ ನಾಯಕ್. ಎಸ್

ಗುರುವಾರ, ಏಪ್ರಿಲ್ 18, 2013

ಕರುಳ ಕೂಗು


************
ಬಯಲ ನಡುವೆ
ಮೆರೆವ  ರಂಗದಿ
“ಅಮ್ಮಾ.. ಹಸಿವು..”
ಎಂಬ ಹಾಡಿಗೆ
ಹಸಿದ ತಿರುಕನ
ಶೋಕ ನಟನೆಗೆ
ನೆರೆದ ರಸಿಕರು
ಕರವ ತಟ್ಟಲು,
ನಟನ ತಾಯಿಯ
ನಟನೆ ಅರಿಯದ
ಮುಗ್ದ ಕಣ್ಗಳು
ಅಸುವ ಧಾರೆಯ
ಸುರಿಸುತ್ತಿತ್ತು.

- ಸಂತೋಷ ನಾಯಕ್. ಎಸ್

ಶುಕ್ರವಾರ, ಏಪ್ರಿಲ್ 12, 2013

*ನೆನಪು*


ಕಾಗೆ ಹದ್ದುಗಳು ಮಾ೦ಸ
ಮುದ್ದೆಯ ಕುಕ್ಕುವಂತೆ,
ಮನದ ಭಾವವ ಕೆದಕಿ
ಮೆದುಳ ಗೆಡ್ಡೆಯ ನೆಕ್ಕದಿರಿ
ನೆನಪುಗಳೆ...
- ಸಂತೋಷ ನಾಯಕ್. ಎಸ್

ಗುರುವಾರ, ಏಪ್ರಿಲ್ 4, 2013

*ನಿಧಿ*
ಚೆಲುವೆ ನಿನ್ನ ಹೆಸರೇನು?
ವರಿಸಲೆನ್ನ ಏನ ಬಯಸುವೆ?
ಎಂದು ನಾ ಕೇಳಲು ,
 ಆಕೆಯ ಅಂದ ಮೊಗದಿ,
ಮಂದಹಾಸ ಹೊತ್ತುತ೦ತು
 ಒಂದೇ ಶಬ್ದ   “ನಿಧಿ” !!

- ಸಂತೋಷ ನಾಯಕ್. ಎಸ್