ಹಿಂಬಾಲಿಸಿ

ಶುಕ್ರವಾರ, ಆಗಸ್ಟ್ 30, 2013

ಪಯಣ


ಪಯಣ
*******
ಅಪರಿಚಿತರು
ಪರಿಚಿತರಾಗುವಷ್ಟರಲ್ಲಿ
ನೆನಪುಗಳ ಬುತ್ತಿಕಟ್ಟಿ
ಮು೦ದೆ ಸಾಗಿತು
ಬಾಳ ಪಯಣ.
ಬಾಳ ದಾರಿಯಲಿ
ಈಗ ಅನುದಿನವು
ನೆನಪುಗಳ ಮೆಲುಕು
ಮತ್ತೆ ಬುತ್ತಿಯಲಿ
ನವೀನ ಸ೦ಗ್ರಹ.
- ಸಂತೋಷ ನಾಯಕ್. ಎಸ್


ಶುಕ್ರವಾರ, ಆಗಸ್ಟ್ 23, 2013

ಭಾವನೆ

********
ಹೇಳಲಾರದ
ಭಾವನೆಗಳೇ ಹಾಗೆ,
ಅಪ್ರಕಟಿತ ಕವನಗಳಂತೆ
ಹೃದಯದಲ್ಲೇ ಅಚ್ಚಾಗಿರುತ್ತವೆ.

  - ಸಂತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

ಶನಿವಾರ, ಆಗಸ್ಟ್ 10, 2013

ನಿಸ್ವಾರ್ಥಿ


********
ಆಶ್ರಮದಿ ಮುಪ್ಪ ಕಳೆವ
ಮಗನ ಶ್ರೇಯ ಬಯಸುತಿರುವ
ಹಾಲನ್ನಿತ್ತು ಪೊರೆದ ತಾಯಿ.

ಮಗನ ವಿದ್ಯೆ ವೃತ್ತಿಗೆಂದು
ಆಸ್ತಿ, ದುಡಿಮೆ ಒತ್ತೆ ಇಟ್ಟು
ಹಸಿದ ಹೊಟ್ಟೆ ನೀರ ಬಟ್ಟೆ
ದಿನವ ಕಂಡ ತೆಂದೆ ದೇವ.

ಜ್ಞಾನ-ವಿದ್ಯೆ ಪಂಥದಲ್ಲಿ
ಶಿಷ್ಯನೆದುರು ಸೊಲುಕ೦ಡು
ಸೋಲಿನಲ್ಲೂ ಗೆಲುವ ಕ೦ಡ
ಬ್ರಹ್ಮರೂಪಿ ಗುರುದೇವ

ಈ ಮೂರು ದೇವರೋಳು
 ಸ್ವಾರ್ಥದ್ವಿಷವು ಇರುತಿರೆ
ಕಾಣಲಿತ್ತೆ ಮಗನ ಯಶದ ಗರಿ?


  - ಸಂತೋಷ ನಾಯಕ್. ಎಸ್

ಶುಕ್ರವಾರ, ಆಗಸ್ಟ್ 2, 2013

*ಸಹನೆ*


********
ಆರ್ಭಟದ ಕಾರ್ಮೊಡವನು
ತಂಗಾಳಿಯು ನೀರಾಗಿಸುವಂತೆ
ಸಹನೆಯಿಂದಿರೆ,
ಕೊಲುವ ಕಷ್ಟವೂ ಕರಗುವುದು - ಸಣ್ಣಣ್ಣ

  - ಸಂತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ