ಶನಿವಾರ, ನವೆಂಬರ್ 23, 2013

ಬಿಸಿ-ಊಟ

ಬಿಸಿ-ಊಟ
***********
ಬಿಸಿಯೂಟದಲಿ
ಕರ್ನಾಟಕಕ್ಕೆ ಮೊದಲ
ಸ್ಥಾನವಂತೆ
ನಮ್ಮ ಮಂತ್ರಿಗಳೇ
ಹೀಗೆ ತಿನಿಸಿ ಗಳಿಸುವುದರಲ್ಲಿ
ಸದಾ ಮುಂದೆ, ಊಟಕ್ಕಿಲ್ಲದ
ಉಪ್ಪಿನಕಾಯಿಯಂತೆ.

- ಸ೦ತೋಷ ನಾಯಕ್. ಎಸ್



ದೇವರ ಹನಿ

ಅಣ್ಣಾವ್ರಿಗೆ ಅಭಿಮಾನಿಗಳೇ ದೇವರು
ಸಚಿನ್  ಅಭಿಮಾನಿಗಳಿಗೇ ದೇವರು
ದ್ವಂದ್ವಗೊಳಗಾಗಿ ನೋಡದಿರು
ಎದಿರು ಬದಿರು
ಕಾಣ್ವ ಕಣ್ಗಳಲಿ ಶ್ರದ್ದೆಇರೆ
ಎಲ್ಲೆಲ್ಲೂ ಇಹನು ದೇವರು.

- ಸ೦ತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ

ಶುಕ್ರವಾರ, ನವೆಂಬರ್ 15, 2013

*ಅಂತರ*



ಪರದೆ ಮೇಲೆ ಬಟ್ಟೆ
ಬಿಚ್ಚಿದರೆ ನಟಿ
ಗೋಡೆಗಳ ನಡುವೆ
ಬಿಚ್ಚಿದರೆ ವೇಶ್ಯೆ.
ನಟಿಗೆ ಸಮ್ಮಾನ
ವೆಶ್ಯೇಗವಮಾನ.

ಬಿದ್ದವರ ಒದ್ದು
ಇದ್ದವರ ಅಂತಸ್ತಿಗೆ
ಅಂತರದ ಏಣಿ
ಇಡುವ ಕುರುಡು
ಸಮಾಜವೆ ಹೀಗೆ.  
  
- ಸ೦ತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ

*ರೂಢಿ*


*ರೂಢಿ*
**********

ತುಂಡುಡುಗೆ ನಟಿಗೆ
ಮೈ ತು೦ಬಾ ಶಾಲು
ಹೊದೆಸಿ ಹೂ ಹಾರದ
ಸಮ್ಮಾನ,
ತಾನಿರುವ ರೂಢಿಗೆ
ಇದೊಂದು ಇದೊಂದು
ಅಪಮಾನ ಅಂದಿತು
ನಟಿಯ ಮನ.

- ಸ೦ತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

*ಕನ್ನಡ ಶಾಲೆ*



***********
ಅ ಆ ಕಲಿಸಿದ ಕನ್ನಡ ಶಾಲೆ
ಕನ್ನಡಬ್ಬೆಯ ಕೊರಳಿನ ಮಾಲೆ
ಆಂಗ್ಲ ಮೋಹದ ಕಾಮಾಲೆ
ಕಣ್ಣಿಗೇನು ಗೊತ್ತು    
ಕನ್ನಡ  ಮಾಲೆಯ ಕಸ್ತೂರಿ ಲೀಲೆ?
 ಕನ್ನಡ ಶಾಲೆಯ ಮುಚ್ಚುವುದು
ಹೆತ್ತಬ್ಬೆಯ ಕಣ್ಣ ಚುಚ್ಚಿದ೦ತೆ – ಸಣ್ಣಣ್ಣ.

- ಸ೦ತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

ಶುಕ್ರವಾರ, ಅಕ್ಟೋಬರ್ 25, 2013

*ಮಿಂಚು*


********
ನಿನ್ನ ಕಣ್ಗಳ ಕಾಂತಿಯ
ಏನೆಂದು ಬಣ್ಣಿಸಲಿ ನಲ್ಲೆ!?
ಅದರ ಕಾಂತಿಯ ಹೊಳಪು
ನೀ ತವರಿಗೆ ಹೋದ
ತಿಂಗಳ ‘ಕರೆಂಟ್ ಬಿಲ್’’
ಕಂಡಾಗಲೇ ಅರಿವಾಯಿತು ...
 - ಸ೦ತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

ಮಂಗಳವಾರ, ಅಕ್ಟೋಬರ್ 15, 2013

ಪ್ರಶ್ನೆ


ಪ್ರಶ್ನೆ
****
ತನ್ನಲ್ಲದ ಲೇಖನಿಯಿಂದ
ತನ್ನ ಭಾವವ ಬರೆಯಲಾರೆ
ಎನುವ ಕವಿಗೆ
ಅಹಂ ಎನ್ವಿರೆ? ನೀವು
ಸ್ವಾಭಿಮಾನಿ ಎನ್ವಿರೆ??
- ಸಂತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ