ಶುಕ್ರವಾರ, ಡಿಸೆಂಬರ್ 20, 2013

ಪಾಪ!


****
ಪಾಪ !
ಆ ಸೂರ್ಯನೂ
ಕಲ್ಪಿಸಿರಲ್ಲಿಕ್ಕಿಲ್ಲ
ಕ್ಷುಲ್ಲಕ ಮೋಡವೂ
ಕೂಡ ತನ್ನ ಕಾಂತಿಯ
ತಡೆಯುವುದೆಂದು,
ಇಲ್ಲದಿರೆ,
ಎತ್ತರಕ್ಕೇರುವ ಬದಲು
ತಗ್ಗಿನಲ್ಲೇ ತಗ್ಗಿ ಬಗ್ಗಿ
ನಡೆಯುತಿರ್ದ .

:ಸಂತೋಷ ನಾಯಕ್ ಎಸ್.

ಶರಣು




*****
ಸಾಸಿರ ಕಶೇದ
ಗಂಡನ ಗೊಡ್ಡು ಮೀಸೆಗೆ
ಅಂಜದ ಮಹಾಸತಿಯ
ಹೆದರಿಸಿದ ದ್ವಿಕೇಶಿ
ಮೀಸೆಯ ಜಿರಳೆಯ
ರಗಳೆಗೆ ಸಾವಿರ (ದ ) ಶರಣು !
:ಸಂತೋಷ ನಾಯಕ್ ಎಸ್.




ಶುಕ್ರವಾರ, ಡಿಸೆಂಬರ್ 6, 2013

ಹದಿಹರೆಯ



********
ಹದಿಹರೆಯವೆ೦ಬುವುದು
ಪಾದರಸದ೦ತೆ ಚ೦ಚಲ,
ಕಣ್ಮು೦ದೆ ಬೆ೦ಕಿಯಲಿ
ಸುಡುವ ಭ್ರಮರವ ಕಾಣುತಿರೆ,
ಬೆ೦ಕಿಯ ಬಿಗಿದಪ್ಪುವ ಚಪಲ.    


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ

ಗುರುವಾರ, ಡಿಸೆಂಬರ್ 5, 2013

ವಿರಹ

ವಿರಹ
******
ವಿರಹ ಗೀತೆ ಬರೆಯಲೆಂದು
ಕಲಾಮು ಎತ್ತಿದೆ
ಮನದಿ ವಿರಹ ವಿದ್ದರೇನು?
ಹೃದಯ ತುಂಬಾ ಇಹುದುಪ್ರೀತಿ
ವಿರಹ ಗೀತೆ ಬರೆಯಲಾರೆ
ಎಂದು ಕಲಾಮು ಸಲಾಮು
ಹೊಡೆಯಿತು!

:ಸಂತೋಷ ನಾಯಕ್ ಎಸ್.

ಶನಿವಾರ, ನವೆಂಬರ್ 30, 2013

ಬೆಪ್ಪು-ತಕ್ಕಡಿ


************
ಜೇವನವೊ೦ದು ತಕ್ಕಡಿ
ಎಂದವನು ಬೆಪ್ಪು-ತಕ್ಕಡಿ!
ತಕ್ಕಡಿಯಲಿ ಸಮಾನ
ತೂಗುವುವು ಎರಡೂ
ತಟ್ಟೆಗಳು,
ಜೀವನದಿ ಸಮ ತೂಗುವವೇ
ಕಷ್ಟ ಸುಖಗಳು??


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ

ಶುಕ್ರವಾರ, ನವೆಂಬರ್ 29, 2013

ತಲೆ-ಅಂತರ

ತಲೆ-ಅಂತರ
***********
ಆಫೀಸ್ನಾಗ ಅಪ್ಪ
ಬರಿತಾನ
ಕ್ಯಾಶ್ ಬುಕ್ಕು
ಮನಿಯಾಗ ಮಗ
ನೋಡ್ತಾನ ಫೇಸ್ಬುಕ್ಕು

ಅಪ್ಪ ಸದಾ ಬಯಸೋದು
ಸ್ಯಾಲರಿ ಹೈಕು
ಮಗ ಫೇಸ್ಬುಕ್ನಾಗ
ಓತ್ತೋದು ಬರೇ ಲೈಕು

ಕಾಸಿರದೆ ಬಳಿದಿಲ್ಲ
ಗೋಡೆಗೆ ಸೀಮೆಂಟು
ಮಗ ಗೋಡೆ ಮೇಲೆ
ಬರಿತಾನ ಬಿಡುವಿಲ್ಲದೆ
ಕಾಮೆಂಟು

ತಿಂಗಳ ಕೊನೆಯಲ್ಲಿ
ಅಪ್ಪನ ಕಿಸೆ ಡ್ಯಾಮೇಜು
ನಿಂತಿಲ್ಲ ಮಗನ
ಬಿಡುವಿಲ್ಲದ ಮೆಸೇಜು

ದುಡಿದು ದಣಿದು
ಅಪ್ಪ ಕ್ಲೀನ್ ಔಟು
ಇಷ್ಟಾದರೂ ಮಗ
ಮಾಡುತ್ತಿಲ್ಲ ಲಾಗ್ಔಟು.


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ

ನಿದ್ದೆ

ನಿದ್ದೆ
ನಿದ್ದೆ
****
ಬಾಳದಾರಿಯಲಿ
ಅಂದು ಬಿದ್ದೆ
ಇಂದು ಎದ್ದೆ
ಪಥವ ನೆನೆದು
ಕೊರಗುತ್ತಿದ್ದೆ.
ಎಲ್ಲ ಕೊರಗನು
ಕ್ಷಣದಿ ಮರೆಸಿತು
ಸಣ್ಣ ನಿದ್ದೆ!

:ಸಂತೋಷ ನಾಯಕ್ ಎಸ್.