ಬುಧವಾರ, ಜನವರಿ 15, 2014

ದಿಗ್ಭಂಧ

ದಿಗ್ಭಂಧ
ದಿಗ್ಭಂಧ
******
ಅಮವಾಸ್ಯೆ ರಾತ್ರಿಯ
ಕತ್ತಲ ಕಪ್ಪುಡುಗೆಯ
ಕಟ್ಟಳೆಯ ನಡುವೆಯೂ,
ಮಿನುಗು ತಾರೆಯ
ಚುಕ್ಕಿ ಇಟ್ಟು, ರಂಗಿಗಾಗಿ
ಹಾತೊರೆಯುತ್ತಿತ್ತು ಆಗಸ.

:ಸಂತೋಷ ನಾಯಕ್ ಎಸ್.

ಗುರುವಾರ, ಜನವರಿ 9, 2014

ನಾಟಕ ಶಾಲೆ


ನಾಟಕ ಶಾಲೆ
ನಾಟಕ ಶಾಲೆ
ನಿಜವಾಗಿಯೂ ನಿಜ
ಜೀವನ ಒಂದು
ನಾಟಕ ಶಾಲೆ!!
ಇಲ್ಲಿ ,
ಉಳ್ಳವನ  ನಾಟಕಕ್ಕೆ
ಭಾರೀ ಬೆಲೆ,
ಬಡವನ ನಾಟಕ ತುಂಬಾ
ಕಣ್ಣೀರ ಹೊಳೆ!

:ಸಂತೋಷ ನಾಯಕ್ ಎಸ್.

ಶುಕ್ರವಾರ, ಡಿಸೆಂಬರ್ 20, 2013

ಪಾಪ!


****
ಪಾಪ !
ಆ ಸೂರ್ಯನೂ
ಕಲ್ಪಿಸಿರಲ್ಲಿಕ್ಕಿಲ್ಲ
ಕ್ಷುಲ್ಲಕ ಮೋಡವೂ
ಕೂಡ ತನ್ನ ಕಾಂತಿಯ
ತಡೆಯುವುದೆಂದು,
ಇಲ್ಲದಿರೆ,
ಎತ್ತರಕ್ಕೇರುವ ಬದಲು
ತಗ್ಗಿನಲ್ಲೇ ತಗ್ಗಿ ಬಗ್ಗಿ
ನಡೆಯುತಿರ್ದ .

:ಸಂತೋಷ ನಾಯಕ್ ಎಸ್.

ಶರಣು




*****
ಸಾಸಿರ ಕಶೇದ
ಗಂಡನ ಗೊಡ್ಡು ಮೀಸೆಗೆ
ಅಂಜದ ಮಹಾಸತಿಯ
ಹೆದರಿಸಿದ ದ್ವಿಕೇಶಿ
ಮೀಸೆಯ ಜಿರಳೆಯ
ರಗಳೆಗೆ ಸಾವಿರ (ದ ) ಶರಣು !
:ಸಂತೋಷ ನಾಯಕ್ ಎಸ್.




ಶುಕ್ರವಾರ, ಡಿಸೆಂಬರ್ 6, 2013

ಹದಿಹರೆಯ



********
ಹದಿಹರೆಯವೆ೦ಬುವುದು
ಪಾದರಸದ೦ತೆ ಚ೦ಚಲ,
ಕಣ್ಮು೦ದೆ ಬೆ೦ಕಿಯಲಿ
ಸುಡುವ ಭ್ರಮರವ ಕಾಣುತಿರೆ,
ಬೆ೦ಕಿಯ ಬಿಗಿದಪ್ಪುವ ಚಪಲ.    


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ

ಗುರುವಾರ, ಡಿಸೆಂಬರ್ 5, 2013

ವಿರಹ

ವಿರಹ
******
ವಿರಹ ಗೀತೆ ಬರೆಯಲೆಂದು
ಕಲಾಮು ಎತ್ತಿದೆ
ಮನದಿ ವಿರಹ ವಿದ್ದರೇನು?
ಹೃದಯ ತುಂಬಾ ಇಹುದುಪ್ರೀತಿ
ವಿರಹ ಗೀತೆ ಬರೆಯಲಾರೆ
ಎಂದು ಕಲಾಮು ಸಲಾಮು
ಹೊಡೆಯಿತು!

:ಸಂತೋಷ ನಾಯಕ್ ಎಸ್.

ಶನಿವಾರ, ನವೆಂಬರ್ 30, 2013

ಬೆಪ್ಪು-ತಕ್ಕಡಿ


************
ಜೇವನವೊ೦ದು ತಕ್ಕಡಿ
ಎಂದವನು ಬೆಪ್ಪು-ತಕ್ಕಡಿ!
ತಕ್ಕಡಿಯಲಿ ಸಮಾನ
ತೂಗುವುವು ಎರಡೂ
ತಟ್ಟೆಗಳು,
ಜೀವನದಿ ಸಮ ತೂಗುವವೇ
ಕಷ್ಟ ಸುಖಗಳು??


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ