ಹಿಂಬಾಲಿಸಿ

ಸೋಮವಾರ, ಫೆಬ್ರವರಿ 25, 2013*****
ಮನದ ಕನ್ನಡಿಯೊಳಗೆ ನೀ
ಮನೆ ಮಾಡಿರಲು ..
ಮೆನೆಯ ಕನ್ನಡಿಯೊಳು
ನನ ಮೊಗವ ಕಾಣದಾಗಿಹನು,
ನಲ್ಲೆ..
ಕನ್ನಡಿಯೊಳಗಿನ ಗಂಟಾಗದೆ,
ಮನದ ಮೌನವ ಮುರಿಯಬಾರದೆ?

- ಸಂತೋಷ ನಾಯಕ್. ಎಸ್ 

ಭಾನುವಾರ, ಫೆಬ್ರವರಿ 17, 2013

ಎರಡು ಹನಿ ಮಂಥನ
********
ನಲ್ಲೆ, ನನ್ನ ನಿನ್ನ ಕದನ
ಅಲ್ಲ ಅದು ಕದನ.
ಅದು ಮಧುರ ಮಾತಿನ
ಮಂಥನ ,
ಮನದ ವಿಷದ ಮರಣ
ಕವನ ಅಮೃತದ ಜನನ.

ಹೆಂಡತಿ
********
ಬಳಿ ಇರಲು ಅನುಕ್ಷಣವು
ಪ್ರಾಣ ಹಿಂಡುತಿ ..
ಇಲ್ಲದಿರೆ ಅನುದಿನವು
ನನಗೆ ಹೆಂಡ – ಅತಿ!!  

-ಸಂತೋಷ ನಾಯಕ್. ಎಸ್ 

ಶನಿವಾರ, ಫೆಬ್ರವರಿ 16, 2013


ವೈರಾಗ್ಯ
ವೈರಾಗ್ಯ
ಶಿಕ್ಷಣದ ದಿನಗಳು ಪುಸ್ತಕದ
ಬದನೆಕಾಯಿ ಅರ್ಥವಾಗದೆ
ಕಳೆದುಹೋಯಿತು.
ಉದ್ಯೋಗ ಉದ್ಯಮದಲಿ
ಅರ್ಥ ಸಿಗದೇ ಕಳೆದುಹೋಯಿತು.
ಅರ್ಥಗಳ ಅರ್ಥೈಸುವಷ್ಟರಲಿ
ವೈರಾಗ್ಯ ಮನೆ ಮಾಡಿತ್ತು.   

-ಸಂತೋಷ ನಾಯಕ್. ಎಸ್ 

ಬುಧವಾರ, ಫೆಬ್ರವರಿ 13, 2013

ಎರಡು ಹನಿ

ನಿರೀಕ್ಷೆ
ದೀಪ ಹಚ್ಚಲು
ದೀಪಾವಳಿ ಬೇಕೆ?
ನಲ್ಲೆ,
ನೀ ಕೊಡುವ
ಮುತ್ತಿನುಡುಗೊರೆಗೆ
ಪ್ರೇಮಿ ದಿನದ
ನಿರೀಕ್ಷೆ ಯಾಕೆ?

~~~~~~~~~
ದಾ೦ಪತ್ಯ
*********
ಅರಿತು ಬಾಳಿದರೆ
ಅನುದಿನವು ಹಬ್ಬ.
ಪ್ರೀತಿ ಇರದಿರೆ
ಇಂಜಿನ್ ಇಲ್ಲದ
ರೈಲು ಡಬ್ಬ !!!

-ಸ೦ತೋಷ ನಾಯಕ್. ಎಸ್ 

ಗುರುವಾರ, ಫೆಬ್ರವರಿ 7, 2013

ರಸಿಕಬಣ್ಣ ಕಪ್ಪೆಂದು ಕಣ್ಣ ಮುಚ್ಚದಿರಿ
ಕತ್ತಲೆಯ ಕಪ್ಪಿರದೆ ನಕ್ಷತ್ರ
ಹೊಳೆಯುವುದೆ?
ಕತ್ತಲ ಕಪ್ಪಿನ ರಸದ ರುಚಿಯು
ರಸಿಕನಲ್ಲದೆ ಮತ್ತಾರಿಗೆ
ತಿಳಿಯುವುದೆ?
-      ಸ೦ತೋಷ ನಾಯಕ್. ಎಸ್