ಹಿಂಬಾಲಿಸಿ

ಶನಿವಾರ, ನವೆಂಬರ್ 30, 2013

ಬೆಪ್ಪು-ತಕ್ಕಡಿ


************
ಜೇವನವೊ೦ದು ತಕ್ಕಡಿ
ಎಂದವನು ಬೆಪ್ಪು-ತಕ್ಕಡಿ!
ತಕ್ಕಡಿಯಲಿ ಸಮಾನ
ತೂಗುವುವು ಎರಡೂ
ತಟ್ಟೆಗಳು,
ಜೀವನದಿ ಸಮ ತೂಗುವವೇ
ಕಷ್ಟ ಸುಖಗಳು??


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ

ಶುಕ್ರವಾರ, ನವೆಂಬರ್ 29, 2013

ತಲೆ-ಅಂತರ

ತಲೆ-ಅಂತರ
***********
ಆಫೀಸ್ನಾಗ ಅಪ್ಪ
ಬರಿತಾನ
ಕ್ಯಾಶ್ ಬುಕ್ಕು
ಮನಿಯಾಗ ಮಗ
ನೋಡ್ತಾನ ಫೇಸ್ಬುಕ್ಕು

ಅಪ್ಪ ಸದಾ ಬಯಸೋದು
ಸ್ಯಾಲರಿ ಹೈಕು
ಮಗ ಫೇಸ್ಬುಕ್ನಾಗ
ಓತ್ತೋದು ಬರೇ ಲೈಕು

ಕಾಸಿರದೆ ಬಳಿದಿಲ್ಲ
ಗೋಡೆಗೆ ಸೀಮೆಂಟು
ಮಗ ಗೋಡೆ ಮೇಲೆ
ಬರಿತಾನ ಬಿಡುವಿಲ್ಲದೆ
ಕಾಮೆಂಟು

ತಿಂಗಳ ಕೊನೆಯಲ್ಲಿ
ಅಪ್ಪನ ಕಿಸೆ ಡ್ಯಾಮೇಜು
ನಿಂತಿಲ್ಲ ಮಗನ
ಬಿಡುವಿಲ್ಲದ ಮೆಸೇಜು

ದುಡಿದು ದಣಿದು
ಅಪ್ಪ ಕ್ಲೀನ್ ಔಟು
ಇಷ್ಟಾದರೂ ಮಗ
ಮಾಡುತ್ತಿಲ್ಲ ಲಾಗ್ಔಟು.


:ಸಂತೋಷ ನಾಯಕ್ ಎಸ್.

ಚಿತ್ರಮೂಲ: ಅಂತರ್ಜಾಲ

ನಿದ್ದೆ

ನಿದ್ದೆ
ನಿದ್ದೆ
****
ಬಾಳದಾರಿಯಲಿ
ಅಂದು ಬಿದ್ದೆ
ಇಂದು ಎದ್ದೆ
ಪಥವ ನೆನೆದು
ಕೊರಗುತ್ತಿದ್ದೆ.
ಎಲ್ಲ ಕೊರಗನು
ಕ್ಷಣದಿ ಮರೆಸಿತು
ಸಣ್ಣ ನಿದ್ದೆ!

:ಸಂತೋಷ ನಾಯಕ್ ಎಸ್.

ಗುರುವಾರ, ನವೆಂಬರ್ 28, 2013

ರಾಶಿ
ರಾಶಿ
******
ಉಚ್ಛ ಕುಲಜಾತನೂ
ಜಾತಿಗಪವಾದ
ಕಾರಣ
ಮೀನ-ರಾಶಿ!

:ಸಂತೋಷ ನಾಯಕ್ ಎಸ್.

ಶನಿವಾರ, ನವೆಂಬರ್ 23, 2013

ಜಾತ್ಯತೀತ

**********
ನಮ್ಮ ಜಾತ್ಯತೀತ
ಸರಕಾರ ಮಾಡಹೊರಟಿದೆ
ಜಾತಿ-ವಾರು ಜನ ಗಣನೆ.
ನ೦ತರ,
ಆ ಜಾತಿಗೆ ಹೊನ್ನ ಮಣೆ
ಈ ಜಾತಿಗೆ ಮಣ್ಣ  ಮಣೆ
ಹತ್ತು ಹಲವು
ಜಾತಿವಾರು ಯೋಜನೆ!
ಒಡೆದು ಆಳ್ವ ನೀತಿಗೆ
ಕಾಣಲು೦ಟೆ ಜಗದಿ ಕೊನೆ?

- ಸ೦ತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ


ಮೀನ ಹಾ(ಪಾ)ಡು ! (ಮೀನಿನೊಂದಿಗೆ ಮಗುವಾದಾಗ...)

**************
ಮೇವನ್ನೊ೦ದ ಎಸೆದರು
ಎಸೆದು ನನ್ನ ಹಿಡಿದರು
ಹಿಡಿದು ನನ್ನ ಕೊಂದರು.

ಸ್ಥಳದ ಹೆಸರು ಬಂದರು
ಅಲ್ಲಿಗೆ ನನ್ನ ಒಯ್ದರು
ನೋಡ ಜನ ಬಂದರು
ಏಲಂ ಏಲಂ ಎಂದರು

ಮನೆಗೆ ಹೊತ್ತು ತಂದರು
ನನ್ನ ಕಡಿದು ಕೊಯ್ದರು
ಗಡಿಗೆಯೊಳಗೆ ಇತ್ತರು
ಉಪ್ಪು ಖಾರ ಎಸೆದರು
ಒಲೆಯ ಶಾಖ ಕೊಟ್ಟರು
ಎಲ್ಲ ಸೇರಿ ತಿಂದರು .

- ಸ೦ತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

ಬಿಸಿ-ಊಟ

ಬಿಸಿ-ಊಟ
***********
ಬಿಸಿಯೂಟದಲಿ
ಕರ್ನಾಟಕಕ್ಕೆ ಮೊದಲ
ಸ್ಥಾನವಂತೆ
ನಮ್ಮ ಮಂತ್ರಿಗಳೇ
ಹೀಗೆ ತಿನಿಸಿ ಗಳಿಸುವುದರಲ್ಲಿ
ಸದಾ ಮುಂದೆ, ಊಟಕ್ಕಿಲ್ಲದ
ಉಪ್ಪಿನಕಾಯಿಯಂತೆ.

- ಸ೦ತೋಷ ನಾಯಕ್. ಎಸ್ದೇವರ ಹನಿ

ಅಣ್ಣಾವ್ರಿಗೆ ಅಭಿಮಾನಿಗಳೇ ದೇವರು
ಸಚಿನ್  ಅಭಿಮಾನಿಗಳಿಗೇ ದೇವರು
ದ್ವಂದ್ವಗೊಳಗಾಗಿ ನೋಡದಿರು
ಎದಿರು ಬದಿರು
ಕಾಣ್ವ ಕಣ್ಗಳಲಿ ಶ್ರದ್ದೆಇರೆ
ಎಲ್ಲೆಲ್ಲೂ ಇಹನು ದೇವರು.

- ಸ೦ತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ

ಶುಕ್ರವಾರ, ನವೆಂಬರ್ 15, 2013

*ಅಂತರ*ಪರದೆ ಮೇಲೆ ಬಟ್ಟೆ
ಬಿಚ್ಚಿದರೆ ನಟಿ
ಗೋಡೆಗಳ ನಡುವೆ
ಬಿಚ್ಚಿದರೆ ವೇಶ್ಯೆ.
ನಟಿಗೆ ಸಮ್ಮಾನ
ವೆಶ್ಯೇಗವಮಾನ.

ಬಿದ್ದವರ ಒದ್ದು
ಇದ್ದವರ ಅಂತಸ್ತಿಗೆ
ಅಂತರದ ಏಣಿ
ಇಡುವ ಕುರುಡು
ಸಮಾಜವೆ ಹೀಗೆ.  
  
- ಸ೦ತೋಷ ನಾಯಕ್. ಎಸ್
ಚಿತ್ರಮೂಲ: ಅಂತರ್ಜಾಲ

*ರೂಢಿ*


*ರೂಢಿ*
**********

ತುಂಡುಡುಗೆ ನಟಿಗೆ
ಮೈ ತು೦ಬಾ ಶಾಲು
ಹೊದೆಸಿ ಹೂ ಹಾರದ
ಸಮ್ಮಾನ,
ತಾನಿರುವ ರೂಢಿಗೆ
ಇದೊಂದು ಇದೊಂದು
ಅಪಮಾನ ಅಂದಿತು
ನಟಿಯ ಮನ.

- ಸ೦ತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ

*ಕನ್ನಡ ಶಾಲೆ************
ಅ ಆ ಕಲಿಸಿದ ಕನ್ನಡ ಶಾಲೆ
ಕನ್ನಡಬ್ಬೆಯ ಕೊರಳಿನ ಮಾಲೆ
ಆಂಗ್ಲ ಮೋಹದ ಕಾಮಾಲೆ
ಕಣ್ಣಿಗೇನು ಗೊತ್ತು    
ಕನ್ನಡ  ಮಾಲೆಯ ಕಸ್ತೂರಿ ಲೀಲೆ?
 ಕನ್ನಡ ಶಾಲೆಯ ಮುಚ್ಚುವುದು
ಹೆತ್ತಬ್ಬೆಯ ಕಣ್ಣ ಚುಚ್ಚಿದ೦ತೆ – ಸಣ್ಣಣ್ಣ.

- ಸ೦ತೋಷ ನಾಯಕ್. ಎಸ್

ಚಿತ್ರಮೂಲ: ಅಂತರ್ಜಾಲ